ಒಂದು ಒಳ್ಳೆಯ ನುಡಿ - 41

ಒಂದು ಒಳ್ಳೆಯ ನುಡಿ - 41

ಒಳ್ಳೆಯವರ, ಸಜ್ಜನರ ಮನಸ್ಸು ಯಾವಾಗಲೂ ಒಳ್ಳೆಯ ರೀತಿಯಲ್ಲಿಯೇ ಇರುವುದು ಹೌದಾದರೂ, ಸಮಯ, ಸಂದರ್ಭ ಬಂದಾಗ ವಜ್ರಕ್ಕಿಂತಲೂ ಕಠಿಣವಾಗಬಹುದು. ಬೇಕಾದಾಗ ಹೂವಿನ ಎಸಳಿನ ಮೃದುತ್ವ, ಕೋಮಲತೆ ಆಗಲೂ ಬಹುದು. ಮನಸ್ಸಿನ ಒಳಹೊರಗನ್ನು ಅಷ್ಟು ಬೇಗ ಅರಿಯಲು ಸಾಧ್ಯವಿಲ್ಲ. ಸಜ್ಜನಿಕೆ, ಸರಳತೆ ಎನ್ನುವುದು ಅಪ್ಪಟ ಬಂಗಾರವಿದ್ದಂತೆ, ಹೇಳುವುದಾದರೆ (೨೪ ಕ್ಯಾರೆಟ್ ಚಿನ್ನ) ದಂತೆ. ಅಷ್ಟು ವೈಶಾಲ್ಯತೆ ಮತ್ತು ಲೋಕೋತ್ತರವಾದುದು. ಆ ದೇವರಿಗೆ ಮಾತ್ರ ಅದನ್ನು ಅರಿಯಲು ಸಾಧ್ಯ. ನಮ್ಮ ಹಿರಿಯರು ಹಳ್ಳಿಕಡೆ ಹೇಳುವ ಒಂದು ಮಾತಿದೆ *ಹಲಸಿನಕಾಯಿಯನ್ನು ತಿವಿದು ಹೇಗಿದೆ ನೋಡಬಹುದು, ಆದರೆ ಮನುಷ್ಯನ ಮನಸ್ಸನ್ನು ಅರಿಯಲು ಸಾಧ್ಯವಿಲ್ಲ* ಎಂಬುದಾಗಿ.

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ/

ಲೋಕೋತ್ತರಾಣಾಂ ಚೇತಾಂಸಿ ಕೋಹಿವಿಜ್ಞಾತುಮರ್ಹತಿ//

ಆಧಾರ:ಸರಳ ಸುಭಾಷಿತ

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ