ಒಂದು ಒಳ್ಳೆಯ ನುಡಿ - 46

ಒಂದು ಒಳ್ಳೆಯ ನುಡಿ - 46

ಈ ಬದುಕೆಂಬುದು ಒಂದು ಅಳತೆಗೆ ಸಿಗದ ಹಾಸು ಇದ್ದಂತೆ. ಇಲ್ಲಿ ಸತತ ಹೋರಾಟದಲ್ಲಿಯೇ ನಮ್ಮ ಜೀವನ ಕಳೆದು ಹೋಗುತ್ತದೆ.*ಅವ ಚಿನ್ನದ ಚಮಚ ಬಾಯಲ್ಲಿ ಟ್ಟುಕೊಂಡೇ ಹುಟ್ಟಿದ್ದಾನೆ* ಹೇಳುವುದಿದೆ. ಅವನಿಗೆ ಹಿರಿಯರು ಮಾಡಿಟ್ಟ ಆಸ್ತಿ, ಸಂಪತ್ತು ಇದ್ದಾಗ ಈ ಮಾತು ಬರುತ್ತದೆ. ಅವ ಏನೂ ಕಷ್ಟ ಪಡುವುದು ಬೇಡ, ಕುಳಿತು ತಿಂದರೂ ಮುಗಿಯದಷ್ಟು ಐಶ್ವರ್ಯ ಇದೆ ಅಂತ. ಅಂಥವರನ್ನು ನಾವು ಬಹಳಷ್ಟು ಈ ಸಮಾಜದಲ್ಲಿ ನೋಡಿರುತ್ತೇವೆ. ಅವರಿಗೆ ಯಾರೂ ಬೇಡ, ಜನರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಮನುಷ್ಯತ್ವ ಕೆಲವರಲ್ಲಿ ಮಾತ್ರ. ಕೊಡುವ, ನೀಡುವ ಅಭ್ಯಾಸ ಅವರಿಗೆ ಗೊತ್ತೇ ಇಲ್ಲ.

ಬದುಕಿನ ಹೋರಾಟದ ಮಜಲಿನಲ್ಲಿ ನಾವು ಮಾಡುವ ಕಾರ್ಯ, ಇಡುವ ಹೆಜ್ಜೆ ಬಹಳ ಎಚ್ಚರಿಕೆಯಿಂದಿರಬೇಕು. ಪ್ರಾಮಾಣಿಕತೆ ಕಾಣಬೇಕು.ಭಗವಂತ ಏನು ನಿಶ್ಚೈಸಿದ್ದಾನೋ ಅದೇ ಆಗುವುದು. ತಡೆಯಲು ಸಾಧ್ಯವಿಲ್ಲ. ಇಂದಿನ ಈ ಸಂಕಷ್ಟ ನಾವೆಲ್ಲ ಕನಸುಮನಸಲ್ಲು ಎಣಿಸದ ಘೋರತೆ, ಭೀಷಣತೆ ಅಲ್ಲವೇ? ನಮ್ಮಿಂದ ಕೂಡಿದಷ್ಟೂ ಪ್ರಾಮಾಣಿಕರಾಗಿ, ಒಳ್ಳೆಯವರಾಗಿ, ನಿಷ್ಠೆ ಯಿಂದ ಇರಲು ಪ್ರಯತ್ನಿಸೋಣ.

-ರತ್ನಾ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ