ಒಂದು ಒಳ್ಳೆಯ ನುಡಿ (49) - ಒಳ್ನುಡಿಗಳು
ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ ಬತ್ತಿ, ಎಣ್ಣೆ ಎಲ್ಲಾ ಹಾಕಿ, ಉರಿಸಿದಾಗ ಜ್ಯೋತಿ ಬೆಳಗಿ ಕತ್ತಲು ಹೋಗಬಹುದು. ಹಾಗೆಯೇ ಒಳಗಿನ ಕತ್ತಲು, ಅಂಧಕಾರ ಹೋಗಲು ಬೇರೆ ಬೇರೆ ಸಾಧನೆಗಳನ್ನು ಮಾಡಬೇಕು. ಸತತ ಪ್ರಯತ್ನ ಮಾಡಬೇಕು.ಸುಮ್ಮನೆ ಕೈಕಟ್ಟಿ ಕುಳಿತರೆ ಏನೂ ಸಾಧಿಸಲಾಗದು.
***
೧---ವಿದ್ಯಾವಂತರು ಎಲ್ಲಿ ಹೋದರೂ ಬದುಕುವ ದಾರಿ ಕಂಡುಕೊಳ್ಳುವರು.
೨--ಯಾವ ಕೆಲಸವನ್ನೂ ನಾವು ಬದುಕಿಗಾಗಿ ಮಾಡಬಹುದು.ಅಲ್ಲಿ ಸ್ವಪ್ರತಿಷ್ಟೆ ಬೇಲಿಯಾಗಿರಬಾರದು.
೩-ನದಿಯ ನೀರು ಸರಾಗವಾಗಿ ಹರಿಯುತ್ತಿದ್ದರೆ ಮಾತ್ರ ನಿರ್ಮಲ,ಸ್ವಚ್ಛ.
೪--ವಿಧಿಲಿಖಿತ ಅಳಿಸಲು, ಬರೆದ ವಿಧಿ (ಬ್ರಹ್ಮ) ನಿಂದಲೂ ಸಾಧ್ಯವಿಲ್ಲ.
೫-ಸಜ್ಜನರ ಮನಸ್ಸು ನೋಯಿಸಬಾರದು. ಅವರು ತಂಪು ನೀಡುವ ವೃಕ್ಷಗಳ ಹಾಗೆ.
೬--ದುರ್ಜನರು ತಮ್ಮ ಕಾಲಮೇಲೆ ತಾವೇ ಕಲ್ಲುಚಪ್ಪಡಿ ಹಾಕಿಕೊಳ್ಳುವರು.
೭--ದೈವಿಕ ನಿಂದನೆ ಪಾಪಕರವಾದ ಕೆಲಸ.
೮--ಎಲ್ಲಾ ಕಳೆದುಕೊಂಡರೆ, ಮರಳಿ ಸಂಪಾದಿಸಬಹುದು. ಆದರೆ ದೇಹವೇ ಇಲ್ಲದಿರೆ? ಅದನ್ನು ಜೋಪಾನವಾಗಿ ನೋಡಬೇಕು.
೯--ಯಾವಾಗಲೂ ಬೇರೆಯವರಲ್ಲಿ ದೋಷಗಳನ್ನು ಹುಡುಕುತ್ತಾ ಹಂಗಿಸುವವನು, ಒಮ್ಮೆ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ, ತನ್ನ ನಾಲಿಗೆಯಲ್ಲಿ ಹಿಡಿತವಿದೆಯೇ ಪರೀಕ್ಷಿಸಲಿ. ಪರರನ್ನು ಸದಾ ನಿಂದಿಸುವವನು ಅತಿ ಕೀಳು ಮಟ್ಟದವನು.
೧೦-ಹೊಟ್ಟೆ ತುಂಬಿದವಗೆ ಯಾವತ್ತೂ ಊಟ ಬಡಿಸಬಾರದು.
-ರತ್ನಾ ಭಟ್ ತಲಂಜೇರಿ
ಸಂಗ್ರಹ:ನೀತಿ ಶತಕ.