ಒಂದು ಒಳ್ಳೆಯ ನುಡಿ - 55

ಒಂದು ಒಳ್ಳೆಯ ನುಡಿ - 55

ಶುಷ್ಕ ವೈರಂ ನ ಕುರ್ವೀತ ಗೋಶೃಂಗಸ್ಯೇವ ಭಕ್ಷಣಮ್/

ದಂತಾಶ್ಚ ಪರಿಮೃಜ್ಯಂತೇ ರಸಶ್ಚಾಪಿ ನ ಲಭ್ಯತೇ//

ಯಾವಾಗಲೂ ಸುಮ್ಮ ಸುಮ್ಮನೇ ಕಾಲುಕೆದರಿಕೊಂಡು ಬಂದು ಒಣ ಜಗಳ ಮಾಡುವವರು ಬಹಳಷ್ಟು ಜನ ಇದ್ದಾರೆ. ಅದರಿಂದ ಪ್ರಯೋಜನವಿಲ್ಲ. ಗಾಳಿಯಲ್ಲಿ ಗುದ್ದಾಡಿದಂತೆ. ಹಸುವಿನ ಕೋಡನ್ನು ಜಗಿದಂತೆ. ಆರೋಗ್ಯವೂ ಹಾಳು, ಮನಸ್ಸೂ ಹಾಳು. ಏನಾದರೂ ಸಾಧಿಸಿದ ಹಾಗಾಯ್ತೇ, ಅದೂ ಇಲ್ಲ. ಹಲ್ಲು ಬಾಯಿಗೂ ನೋವು. ಗುದ್ದಾಡುವುದು ನ್ಯಾಯ ಇದ್ದಾಗ ಮಾತ್ರ. ಅನ್ಯಾಯದ ಹಾದಿಯಲಿ ಸರಿಯಲ್ಲ. ಹಿಂದಿನದು ಬೇಡ. ವರ್ತಮಾನದಲ್ಲಿ ಇರುವುದು ಇಲ್ಲದ್ದು ನೋಡಿಕೊಂಡು ಮಾತನಾಡಿದರೆ ಬೆಲೆ ಇದೆ. ಪ್ರಕೃತ ನಮಗೆ ಏನು ಬೇಕು, ಅದನ್ನು ಅವಲೋಕಿಸಿ ಮಾತನಾಡಿ ಪಡೆಯಲು ಪ್ರಯತ್ನಿಸೋಣ. ಬುದ್ಧಿವಂತನಾದವನು ಒಂದು ಕಾಲನ್ನು ಮೇಲೆತ್ತುವಾಗ, ಇನ್ನೊಂದು ಕಾಲನ್ನು ನೆಲದಲ್ಲಿ ಗಟ್ಟಿಯಾಗಿ ಊರುತ್ತಾನೆ. ಹಾಗೆಯೇ ನಾವು ಸಹ ಮುಂದಿನ ನೆಲೆ ಗಟ್ಟಿಯಾಗಿ ಹಿಡಿದುಕೊಳ್ಳುವ ಬಗ್ಗೆ ಯೋಚಿಸಿ ಮಾತನಾಡಿದರೆ  ಪ್ರಯೋಜನವಾದೀತು..

(ಸಂಗ್ರಹ:ನಿತ್ಯ ನೀತಿ ಸೂತ್ರ)

-ರತ್ನಾ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ