ಒಂದು ಒಳ್ಳೆಯ ನುಡಿ - 60

ಒಂದು ಒಳ್ಳೆಯ ನುಡಿ - 60

ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ?

*ನ ದೈವಮಿತಿ ಸಂಚಿಂತ್ಯ ತ್ಯಜೇದುದ್ಯೋಗಮಾತ್ಮನಃ/*

*ಅನುದ್ಯಮೇನ ಕಸ್ತ್ಯೆಲಂ ತಿಲೇಭ್ಯಃ ಪ್ರಾಪ್ತುಮರ್ಹತಿ//*

ದೈವದೇವರುಗಳ ಮೇಲೆ ಭಾರಹಾಕಿ ಮನುಷ್ಯ ತನ್ನ ಉದ್ಯೋಗವನ್ನು ಬಿಡಕೂಡದು. ಕಷ್ಟ ಬಂದು ಸಂಪಾದಿಸಿದ್ದರಲ್ಲಿ  ಉಣ್ಣುವಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಕೈಯಿಂದ ಕೆಲಸ ಮಾಡದೆ ಎಳ್ಳಿನಿಂದ ಎಣ್ಣೆ ತೆಗೆಯಬಲ್ಲೆ ಎಂದರೆ ಹೇಗೆ? ದುಡಿಮೆ ಎನ್ನುವುದು ಯಾವ ವ್ಯಕ್ತಿಯನ್ನೂ ವಂಚಿಸಲಾರದು. ಆದರೆ ವ್ಯಕ್ತಿಯೇ ದುಡಿಮೆಗೆ ವಂಚಿಸಬಲ್ಲ. ಯಾವುದೇ ಕೆಲಸವಾದರೂ ಹಮ್ಮುಬಿಮ್ಮು ಇಲ್ಲದೆ ದುಡಿದರೆ ಖಂಡಿತಾ ಫಲವಿದೆ. ಯಾವ ಕೆಲಸವೂ ಸಣ್ಣದೂ ಅಲ್ಲ ದೊಡ್ಡದೂ ಅಲ್ಲ. ಮಾಡುವ ಕೆಲಸದಲ್ಲಿ ನಿಷ್ಟೆ, ನಿಯತ್ತು ಹಾಗೂ ಪ್ರಾಮಾಣಿಕತೆ ಅಗತ್ಯ ಅಷ್ಟೇ. ದುಡಿಯೋಣ ಉಣ್ಣೋಣ.

ಆಧಾರ:ಸುಭಾಷಿತ ರತ್ನಾವಳಿ

-ರತ್ನಾ ಭಟ್, ತಲಂಜೇರಿ