ಒಂದು ಒಳ್ಳೆಯ ನುಡಿ - 63
ಯಾವಾಗಲೂ ಸತ್ಯ ಮತ್ತು ನೇರವಾಗಿ ಮಾತನಾಡುವವರಿಗೆ ಶತ್ರುಗಳು ಹೆಚ್ಚು.
ಪ್ರಾಯಃ ಸರಲಚಿತ್ತಾನಾಂ ಜಾಯತೇ ವಿಪದಾಗಮಃ|
ಋಜುರ್ಯಾತಿ ಯಥಾ ಛೇದಂ ನ ವಕ್ರಃ ಪಾದಪಸ್ತಥಾ||
ಸರಳತೆ ಎನ್ನುವುದು ಉರುಳಾಗಿ ಬಿಡುತ್ತದೆ ಕೆಲವೊಮ್ಮೆ. ನೆಟ್ಟಗೆ ನೇರವಾಗಿ ಬೆಳೆದ ಮರಕ್ಕೆ ಒಳ್ಳೆಯ ಆಕರ್ಷಣೆಯಿದೆ. ಆದರೆ ಗರಗಸದ ಪೆಟ್ಟಿಗೆ ಬಲಿಯಾಗುತ್ತದೆ. ಸೊಟ್ಟ, ಅಡ್ಡಾದಿಡ್ಡಿ ಬೆಳೆದ ಮರ ಕಟ್ಟಿಗೆಗೆ ಮಾತ್ರ.
ಓರ್ವ ಮರದ ವ್ಯಪಾರಿ ಮರಗಳನ್ನು ನೋಡಲು ಬಂದಾಗ, ನೇರವಾಗಿ ಬೆಳೆದ ಮರಗಳನ್ನು ಮಾತ್ರ ವ್ಯಾಪಾರ ಕುದುರಿಸುತ್ತಾನೆ. ಹಾಗೆ ಮನುಷ್ಯರಲ್ಲಿ ಸಹ. ನೇರಮಾತು ಯಾರಿಗೂ ಇಷ್ಟ ಇಲ್ಲ. ಅವನಿಗೆ ಶತ್ರುಗಳು ಹೆಚ್ಚು. ಅವನು ಯಾವಾಗಲೂ ಸಹೃದಯೀ ಆಗಿರುತ್ತಾನೆ. ಸತ್ಯವನ್ನು, ಇದ್ದದ್ದನ್ನು ಇದ್ದ ಹಾಗೆ ಹೇಳುವವರನ್ನು ನಂಬುವವರು ತುಂಬಾ ವಿರಳ. ರಂಗುರಂಗಿನ ಮಾತುಗಳಿಗೆ ಬಲಿಯಾಗಿ, ಎಲ್ಲಾ ಕಳಕೊಂಡಾಗ ಬುದ್ಧಿ ಬರುವುದು. ಎಷ್ಟು ಉಪಕಾರ ಮಾಡಿದ ಮರವಾದರೂ, ನೇರ ಬೆಳೆದ ಮರವನ್ನು ಕಡಿಯುವ ಹಾಗೆ, ಸತ್ಯ ಮಾತನಾಡುವವನ ಸ್ಥಿತಿ. ಸಮಾಜದ ಅಂಕುಡೊಂಕುಗಳನ್ನು ಹೇಳಿದರೆ ಕೇಳುವವರೂ ಇಲ್ಲ. ಕೇಳುವಷ್ಟು ತಾಳ್ಮೆಯೂ ಇಲ್ಲ. ಯಾರು ಏನು ಬೇಕಾದರೂ ಹೇಳಲಿ, ಹೇಳುವ ಮಾತುಗಳು ಹಿತವಾಗಿರಲಿ,ಎಲ್ಲರೂ ಮೆಚ್ಚುವಂತಿರಲಿ.
ಆಧಾರ:ನಿತ್ಯ ನೀತಿ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್