ಒಂದು ಒಳ್ಳೆಯ ನುಡಿ - 66
ನಮ್ಮೆಲ್ಲರ ಬದುಕಿಗೆ ದಾರಿಯನ್ನು ತೆರೆದು ಹಾಸಿದ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂದು ಕಲಿಸಿದ, ನಮ್ಮನ್ನೆಲ್ಲ ತಿದ್ದಿತೀಡಿದ ಗುರುವರ್ಯರ ಚರಣಾರವಿಂದಗಳಿಗೆ ತಲೆಬಾಗಿ ನಮಸ್ಕರಿಸೋಣ.
ಗುರುಕರುಣೆಯೆಂಬುದು ಅನನ್ಯವಾದದ್ದು. ಅದರಲ್ಲಿ ಎಲ್ಲಾ ಸುಖದುಃಖಗಳೂ ಅಡಗಿ, ಹೊರಹೊಮ್ಮಿವೆ.
ಗುರುಗಳ ಆಶೀರ್ವಾದದ ಶ್ರೀ ರಕ್ಷೆ ಸದಾ ಇರಲಿ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ 'ದಾಸವಾಣಿ'. ನೈತಿಕ ಮೌಲ್ಯಗಳ ಸಾರ ಗುರುವಿನ ಮಾತಿನ ಓಘ. ಗುರುವಿನ ನಾಮಕ್ಕೆ ಸಾವಿಲ್ಲ. ಇದ್ದರು ಇಲ್ಲದಿದ್ದರೂ ಗುರುವೇ. ಗುರು ಪೀಠ ,ಗುರು ಪರಂಪರೆಗೆ ನಮೋ ನಮಃ. ಗುರಿಯನ್ನು ಎದುರಿಗೆ ತೋರಿಸಿ ಬೆನ್ನ ಹಿಂದೆ ನಿಂತು,ಹೀಗೆ ಹೋದರೆ,ಹೀಗೆ ಆಗುವೆ ಎಂಬ ಆಶಯ,ಆಸೆ,ಆಕಾಂಕ್ಷೆ ಮನದಲ್ಲಿ ಬಿತ್ತಿದ ಮಹಾನುಭಾವನೆಂದರೆ ಗುರು.
ಬೆಳಗುವ ಬೆಳಗಿಸುವ ದಿವ್ಯ ಜ್ಯೋತಿ,ಸರ್ವಮಾನ್ಯನಾದ ಗುರುವಿಗೆ ನಮಸ್ಕಾರಗಳು.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ