ಒಂದು ಒಳ್ಳೆಯ ನುಡಿ - 68

ಒಂದು ಒಳ್ಳೆಯ ನುಡಿ - 68

ನಾವು ಈ ಹಿಂದೆ ಆಗಿ ಹೋದ ಯಾವುದೇ ವಿಷಯವನ್ನು ಗ್ರಹಿಸಿ ಚಿಂತಿಸಬಾರದು. ಚಿಂತೆ ಎನ್ನುವುದು ನಮ್ಮನ್ನು ಪೂರ್ತಿ ಆವರಿಸಿ ಚಿತೆಯತ್ತ ಒಯ್ಯಬಹುದು. ಆಗಿದ್ದು ಆಗಲಿ, ಮುಂದೆ ನೋಡೋಣ ಎಂಬ ದೃಢತೆಯಿರಲಿ. ‘ವರ್ತಮಾನದ ಬದುಕು ನಮ್ಮನ್ನು ಕೈಬೀಸಿ ಕರೆಯುತ್ತಿದೆ’ ಅದಕ್ಕಾಗಿ ಯೋಚಿಸೋಣ. ಇಂದಿನ ದಿನ ನಮ್ಮದು, ನಾಳೆ ಏನಾಗುವುದೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಬಂದದ್ದನ್ನು ಇದ್ದ ಹಾಗೆಯೇ ಸ್ವೀಕರಿಸುವ, ಸವಾಲುಗಳಿಗೆ ಎದೆಯೊಡ್ಡುವ ಚಾಕಚಕ್ಯತೆ ನಮ್ಮಲ್ಲಿರಲಿ.

*ಗತೇ ಶೋಕೋ ನ ಕರ್ತವ್ಯೋ* *ಭವಿಷ್ಯಂ ನೈವ ಚಿಂತಯೇತ್|*

*ವರ್ತಮಾನೇನ ಕಾಲೇನ* *ವರ್ತಯಂತಿ ವಿಚಕ್ಷಣಾಃ*||

ವರ್ತಮಾನದ ವ್ಯವಹಾರಗಳನ್ನು ಗಮನಿಸಿ ಮುಂದೆ ಸಾಗುವವರೇ ಜಾಣರು,ಬುದ್ಧಿವಂತರು. ಬಾರದ ನಾಳಿನ ಬಗ್ಗೆ ಚಿಂತಿಸದೇ ವರ್ತಮಾನದಲ್ಲಿ ಬದುಕಲು ಕಲಿತರೆ ನಮ್ಮ ಭವಿಷ್ಯವೂ ಉತ್ತಮವಾಗಲಿದೆ.

ಸುಭಾಷಿತ:ಸು.ರತ್ನ ಮಾಲಿಕಾ.

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ