ಒಂದು ಒಳ್ಳೆಯ ನುಡಿ - 71

ಒಂದು ಒಳ್ಳೆಯ ನುಡಿ - 71

* ಸತ್ಯ ಸದ್ಗುಣದ ಮೂಲ.

* ಜ್ಞಾನದ ಕದವನ್ನು ಸಾವಿನವರೆಗೂ ತೆರೆದಿಡಿ.

* ದೇವರನ್ನು ಹುಡುಕಿಕೊಂಡು ಹೋಗಬೇಡಿ. ನಮ್ಮಲ್ಲಿಯೇ ಇದ್ದಾನೆ.

* ಧರ್ಮವನ್ನು ಆಚರಿಸಿ ಮಾನವರಾಗೋಣ.

* ಸಾಹಿತ್ಯವು ಮಾನವ ಸಮಾಜದ ದೊಡ್ಡ ಆಸ್ತಿ, ನೆನಪಿರಲಿ.

* ಕ್ಷಮಾಗುಣ ತಪಸ್ಸಿಗೆ ಸಮ.

* ಮಾನವ ಮೃಗೀಯನಾಗುವುದು ಸಮಾಜದ ಪತನಕ್ಕೆ ನಾಂದಿ.

* ವ್ಯಕ್ತಿ ಯಾವತ್ತೂ ದುಡಿಮೆಗೆ ವಂಚನೆ ಮಾಡಬಾರದು.

* ಯಾರು ಸಹಾಯ ಮಾಡಬಲ್ಲನೋ, ಅವನಿಗೆ ತಪ್ಪುಗಳನ್ನು ಗುರುತಿಸಿ ಹೇಳುವ ಅಧಿಕಾರವೂ ಇದೆ.

* ಸತ್ಯವನ್ನು ಹೇಳಲು ಹಿಂಜರಿಯಬಾರದು, ಆಪಾದನೆಗಳು ಬಂದರೆ ಬರಲಿ. ಎದುರಿಸಿ ಗೆದ್ದು ತೋರಿಸಬೇಕು.

ಆಕರ: ಹಿತೋಕ್ತಿ ದೀಪಿಕಾ

ಸಂಗ್ರಹ: ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ