ಒಂದು ಒಳ್ಳೆಯ ನುಡಿ - 72
ಬುದ್ಧಿವಂತ, ಒಳ್ಳೆಯ ವಿಚಾರಗಳನ್ನು ತಿಳಿದವ ಆದರೂ ಅರಿತು ಮಾತನಾಡಬೇಕು. ನಾವು ದುರ್ಬಲರೋ ಪ್ರಬಲರೋ, ಬೆಂಬಲ ಇದೆಯೋ ಇಲ್ಲವೋ, ಹೇಳುವ ಮಾತಲಿ ತೂಕವಿದೆಯೋ, ನಾಲ್ಕು ಜನ ಒಪ್ಪುವ ಹಾಗಿದೆಯೋ ಇದೆಲ್ಲ ನೋಡಬೇಕು. ನನಗೇ ಎಲ್ಲಾ ಗೊತ್ತಿದೆ ಎಂದು ಯಾವತ್ತೂ ಭಾವಿಸಬಾರದು.
*ಬಹುಬಿರ್ನ ವಿರೋದ್ಧವ್ಯಂ ದುರ್ಬಲೈರಪಿ ಧೀಮತಾ/
ಸ್ಫರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾಃ//*
ನಾವು ಒಂದು ವೇಳೆ ದುರ್ಬಲರಾಗಿದ್ದರೂ ಸಹ ಬಹುಸಂಖ್ಯೆಯಲ್ಲಿರುವವರ ವಿರೋಧ ಕಟ್ಟಿಕೊಳ್ಳಬಾರದು. ಬುಸುಗುಟ್ಟುವ ಸರ್ಪವನ್ನೂ ಸಹ, ಸಣ್ಣ ಇರುವೆಗಳ ಗುಂಪು ತಿಂದುಹಾಕಬಹುದಲ್ಲವೇ?
ಯಾರ ಹತ್ತಿರವೇ ಆಗಲಿ ಹಿಂದೆ ಮುಂದೆ ಯೋಚಿಸಿ, ಸಮಯ, ಸ್ಥಳ, ಸಂದರ್ಭ, ಎದುರಿನ ವ್ಯಕ್ತಿ, ಅವನ ಸ್ವಭಾವ ನೋಡಿ ಮಾತುಕತೆ, ವ್ಯವಹಾರ ಮಾಡೋಣ.
-ರತ್ನಾ ಕೆ.ಭಟ್ ತಲಂಜೇರಿ
ಆಧಾರ ಶ್ಲೋಕ:ಸರಳ ಸುಭಾಷಿತ