ಒಂದು ಒಳ್ಳೆಯ ನುಡಿ - 75
೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ*
೨ ಎಲ್ಲ ದುರ್ದೈವಕ್ಕೆ ಕಾರಣ= *ಆಲಸ್ಯ*
೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = *ಭೀತಿ*
೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= *ಸಮಯ*
೬ ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ = *ಪರೋಪಕಾರ*.
೭ ಅತ್ಯಂತ ಶ್ರೇಷ್ಠ ಸ್ವಭಾವ = *ತಾಳ್ಮೆ* .
೮ ಅತ್ಯಂತ ಕೆಟ್ಟ ಗುಣ = *ಪರನಿಂದೆ*.
೯ ಬಹುತೇಕ ಎಲ್ಲ ರೋಗಗಳಿಗೆ ಮುಖ್ಯಕಾರಣ = *ಅಜೀರ್ಣ* .
೧೦ ಚಟಗಳಲ್ಲಿ ಅತೀ ಕೆಟ್ಟ ಚಟ = *ಚಾಡಿ ಹೇಳುವದು*.
೧೧ ಬಂಧುಗಳಲ್ಲಿ ಶ್ರೇಷ್ಠ ಬಂಧು = *ವಿಶ್ವಾಸ* .
೧೨ ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = *ಅಹಂಕಾರ* .
೧೩ ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = *ದೈವಬಲ* .
೧೪ ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ = *ಆಧ್ಯಾತ್ಮಿಕ ಶಿಕ್ಷಣ* .
೧೫ ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = *ಸಾಲಬಾಧೆ*.
೧೭ ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = *ಹೊಗಳಿಸಿಕೊಳ್ಳುವದು*.
೧೮ ಬದುಕಿನಲ್ಲಿಯೇ ಅತೀ ಹೀನ ಬದುಕು = *ಹಂಗಿನ ಬದುಕು*.
೨೦ ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = *ವಿಶ್ವಾಸ* .
೨೧ ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು = *ಅಜ್ಞಾನ*.
೨೩ ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = *ಸಜ್ಜನರ ನಿಷ್ಕ್ರಿಯತೆ* .
೨೫ ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = *ನಾಲಿಗೆ*.
೨೬ ವರಗಳಲ್ಲಿ ಅತೀ ದೊಡ್ಡ ವರ = *ಆರೋಗ್ಯ* .
೨೭ ದೊಡ್ಡ ಶ್ರೀಮಂತಿಕೆ = *ಸಂತೃಪ್ತಿ*.
೨೮ ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = *ಮೌನ*.
(ಸಂಗ್ರಹ.... ಕೆಲವು ಮೂಲಗಳಿಂದ)
-ಹಾ ಮ ಸತೀಶ, ಬೆಂಗಳೂರು