ಒಂದು ಒಳ್ಳೆಯ ನುಡಿ - 80

ಒಂದು ಒಳ್ಳೆಯ ನುಡಿ - 80

೧--ದೈಹಿಕ, ಸಾಮಾಜಿಕ, ಮಾನಸಿಕ, ಭೌತಿಕ, ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಮೂಲ.

೨-ಮಾನವನವೀಯತೆಯ ವಿಕಾಸಕ್ಕೆ ಶಿಕ್ಷಣ ಬುನಾದಿ

೩-ಮನಸ್ಸು ,ದೇಹ ,ಬುದ್ಧಿಗಳ ವಿಕಾಸವೇ ಶಿಕ್ಷಣ.

೪-ಮಾನವರಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದೇ ಶಿಕ್ಷಣ.

೫--ವಿಶ್ವವನ್ನು ಬದಲಿಸಬಲ್ಲ ಪ್ರಬಲ ಅಸ್ತ್ರ ಶಿಕ್ಷಣಕ್ಕಿದೆ.

೬--ಶಿಕ್ಷಣದಲ್ಲಿ ಅಂಕುಡೊಂಕುಗಳ ದಾರಿ ಹಿಡಿಯದೆ, ನೇರದಾರಿಯಲ್ಲಿ ಸಾಗಿರಿ.

೭--ಜೀವನಕ್ಕೆ ಬೆಳಕು ಶಿಕ್ಷಣ.

೮--ವಿದ್ಯೆ ಎನ್ನುವುದು ಗುರುಗಳ ಗುರು

೯--ಸೂರ್ಯನಂತೆ ಹೊತ್ತಿ ಉರಿಯದೆ ಬೆಳಗಲು ಸಾಧ್ಯವೇ?

೧೦--ಕಲಿಕೆ ಕಹಿ: ಫಲ ಸಿಹಿ

೧೧-ಅನುಭವವೇ ಶಿಕ್ಷಣ

೧೨-ಶಿಕ್ಷಣದಿಂದ ಸಮಸ್ಯೆ ಬಗೆಹರಿಸಿ: ವಿಧಿಲಿಖಿತ ಎನಬೇಡಿ

೧೩-ಎಡವಿದವನ ಕೈಹಿಡಿದು ಮೇಲೆತ್ತಿ:ತಪ್ಪುಗಳ ತಿದ್ದಿ ಬುದ್ಧಿಹೇಳಿ ಕಲಿಸಿ.

೧೪--ಏನು ಗೊತ್ತಿಲ್ಲವೋ ಅದನ್ನು ಕಲಿಸುವುದಲ್ಲ:ಹೇಗೆ ವರ್ತಿಸಬೇಕು ಅದನ್ನು ಕಲಿಸಿ

೧೫--ಅಜ್ಞಾನ ಅಳಿಸಿ: ಸುಜ್ಞಾನದ ದೀವಿಗೆ ಉರಿಸುವ ತೈಲವನೆರೆಯಿರಿ

ಸಂಗ್ರಹ--ರತ್ನಾ ಭಟ್ ತಲಂಜೇರಿ

(ಆಕರ:ಶಿಕ್ಷಣ ಜ್ಯೋತಿ)