ಒಂದು ಒಳ್ಳೆಯ ನುಡಿ - 84

ನಿನ್ನೆಯ ಅಥವಾ ಬದುಕಲ್ಲಿ ಸಾಗಿಬಂದ ದಾರಿಯಲ್ಲಿ ಭೂತಕಾಲದ ನೆನಪುಗಳು ನಮಗೆ ಸ್ಫೂರ್ತಿಯನ್ನು ಕೊಡುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಳ್ಳೋಣ. ಬೇಕಾದ್ದು,ಬೇಡವಾದ್ದು ಎಲ್ಲವನ್ನೂ ಕಸದ ಬುಟ್ಟಿಯಂತೆ ಸಂಗ್ರಹಿಸಿಡುವುದು ಬೇಡ.
ನಿನ್ನೆಯ ನೆನಪು ನಾಳೆಯ ನಿರೀಕ್ಷೆಯೊಂದಿಗೆ, ಇಂದಿನ ವರ್ತಮಾನವನ್ನು ಎದುರಿಸಲು ಸಜ್ಜಾಗೋಣ. ಈ ದಿನದ ಕ್ಷಣಗಳನ್ನು ಸಾರ್ಥಕವಾಗಿಸೋಣ. ಇವತ್ತಿಗೆ ಏನು ಬೇಕು ಅದರ ಬಗ್ಗೆ ಯೋಚಿಸದಿದ್ದರೆ ಬದುಕು ಸಾಗುವುದು ಹೇಗೆ? ಇಂದಿನ ಜೀವನಕ್ಕೆ ಪರಿಧಿಯೊಂದು ಇರಲೇ ಬೇಕಲ್ಲವೇ? ಹಿಂದಿರುಗದೆ ಮುಂದೆ ಮುಂದೆ ಚಕ್ರದ ಹಾಗೆ ಉರುಳಲು ಅಭ್ಯಾಸ ಮಾಡಲೇಬೇಕು. ಜೀವನ ಚಕ್ರ ಸರಾಗವಾಗಿ ಸಾಗಲು ದೃಢತೆಯಿರಬೇಕು. ಒಂದು ನಿಶ್ಚಿತ ಕೆಲಸ ನಮಗಿರಬೇಕು. ಆರೋಗ್ಯಕರವಾದ ಯಾವ ವೃತ್ತಿಯೂ ಆಗಬಹುದು. ಬದುಕಿಗೊಂದು ದಾರಿ ನಾವು ನಾವೇ ಕಂಡು ಹಿಡಿಯಬೇಕು. ಬೇರೆಯವರು ಕೊಟ್ಟಾರೆಂಬ ನಿರೀಕ್ಷೆಯಲಿ ಕೂರುವುದು ಸರಿಯಲ್ಲ. ನಿನ್ನೆಗಳ ಕಳಚಿ ನಾಳೆಗಳ ಯೋಚನೆಯೊಂದಿಗೆ ಇಂದಿನ ಬದುಕು ರೂಪಿಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ