ಒಂದು ಕನಸು ...

ಒಂದು ಕನಸು ...

ಕವನ

ಕನಸಿನಾ ನಗರಿಯಲಿ
ಅವಳ ಮನೆಯನು ಹುಡುಕಿ
ನೋಡಬೇಕಿದೆ ಒಮ್ಮೆ
ಅವಳ ನಗುವಾ....!

ಮನಸಿನಾ ಜಾತ್ರೆಯಲಿ
ಮೌನ ಮೆರವಣಿಗೆ ಹೊರಟು
ನೋಡಬೇಕಿದೆ ಒಮ್ಮೆ
ಅವಳ ಮೊಗವ...!

ತಾರೆಗಳ ತೋಟದಲಿ
ಚಂದಿರನ ಬೆಳಕಿನಲಿ
ನೋಡಬೇಕಿದೆ ಒಮ್ಮೆ   
ಅವಳ ಕಂಗಳಲಿ - ಜಗವ ...!!

                           -ದೇವೇಂದ್ರ ಭಾಗ್ವತ್