ಒಂದು ಖಾಸಗೀ ಕವಿತೆ By droupadhi on Wed, 02/28/2007 - 00:01 ಬರಹ ಇದು ತೀರಾ ಖಾಸಗಿ ಸಂಗತಿ ಎಂಬಂತೆ ಮಳೆ ಉರಿಯ ನಡುವೆ ಎರಡು ಹನಿ ಬೀಳಿಸಿ ಹೋಯಿತು. ನೀ ಬಂದಾಗ ನನಗೆ ಆಗುವ ಹಾಗೆ , ಮಣ್ಣೆಲ್ಲ 'ಘಂ' ಅಂತ ಪುಲಕಗೊಂಡು, ನವಿಲುಗಳು ಬನದಲ್ಲಿ ಕೇಕೆ ಹಾಕಲು ತೊಡಗಿತು.