ಒಂದು ಗಜ಼ಲ್ - ಕೇಳು ಗೆಳತಿ...

ಒಂದು ಗಜ಼ಲ್ - ಕೇಳು ಗೆಳತಿ...

ಕವನ

ಸಿಂಗಾರದ ನಡುವೆ ಗುಲಾಬಿಯ ಹೂವನಿಟ್ಟಂತೆ ಕೇಳು ಗೆಳತಿ

ಪಿಂಗಾರದ ಮೋಹಕತೆಗೆ ಬೊಟ್ಟನಿಟ್ಟಂತೆ ಕೇಳು ಗೆಳತಿ

 

ಯೌವನದ ಮಾತುಗಳಲ್ಲಿ ಮತ್ತೆ ಪ್ರೀತಿಯು ಅರಳುವುದುಂಟೆ

ಸಂಬಂಧವಿಲ್ಲದ ಒಲವುಗಳೆಲ್ಲ ಬದುಕಿನಲ್ಲಿ ಚಟ್ಟವಿಟ್ಟಂತೆ ಕೇಳು ಗೆಳತಿ

 

ಮತ್ಸರದ ನುಡಿಗಳಲ್ಲಿ ಇನ್ನೊಮ್ಮೆ ಮೋಹಕತೆ ಕಾಣುವುದುಂಟೆ

ಹೂವಿನೊಳಗಣ ಮಕರಂದ ಚೆಲ್ಲಲು ಬಟ್ಟಲುಯಿಟ್ಟಂತೆ ಕೇಳು ಗೆಳತಿ

 

ಚಿಂತೆಯಿರುವ ತನುವಿನಲ್ಲಿ ಕಾಂತಿಯ ಸೊಗಸು ಹೊಮ್ಮವುದೆ

ಜಾತ್ರೆಯ ಸಮಯದಲ್ಲಿ ಕೊರಳಿಗೆ ಕಾಗೆಯ ಬಂಗಾರವಿಟ್ಟಂತೆ ಕೇಳು ಗೆಳತಿ

 

ಮೋಸವಿರುವಲ್ಲಿ ಸುಲಿಗೆಯವರು  ನೂರಾರು ಜನರು ಇರುವುದಿಲ್ಲವೆ

ಈಶನ ಧ್ವನಿಯ ಅಡಗಿಸಲು ಬಂಡೆಯಿಟ್ಟಂತೆ ಕೇಳು ಗೆಳತಿ

 

-ಹಾ ಮ ಸತೀಶ

 

ಚಿತ್ರ್