ಒಂದು ಗಝಲ್- ನನ್ನ ಗೆಳತಿ

ಒಂದು ಗಝಲ್- ನನ್ನ ಗೆಳತಿ

ಕವನ

ಮುನಿಸು ಕಳೆದು ಮಾತು ನೆಗೆಯಲಿ ಗೆಳತಿಯೆ

ಕನಸು ಒಡೆದು ನನಸು ಹೊಳೆಯಲಿ ಗೆಳತಿಯೆ

 

ಚೆಲುವು ಅರಳಿ ರಶ್ಮಿ ಸುರಿಯುತ ಹಾಡದೆ

ಒಲವು ಚಿಗುರಿ ಪ್ರೀತಿ ಬೆರೆಯಲಿ ಗೆಳತಿಯೆ

 

ಸವಿಯ ಸುಖದಿ ಚಿತ್ತ ಕುಣಿಯುತ ಸಾಗದೆ

ಖುಷಿಯ ಪಡುತ ಬಾಳು ಸೆಳೆಯಲಿ ಗೆಳತಿಯೆ

 

ಕಸಿಯು ಬಸಿದು  ಪ್ರೇಮ ಅರಳುತ ಬೆಳೆದಿದೆ

ದೆಸೆಯು ಬರುತ ಮೋಹ ಹರಿಯಲಿ ಗೆಳತಿಯೆ

 

ಮನದಿ ರಣಿತ ಈಶ ಬೆಳಗುತ ನಡೆದನೆ

ವರದಿ ಗುರುತು ಕಣ್ಣ ಕರೆಯಲಿ ಗೆಳತಿಯೆ

 

-ಹಾ ಮ ಸತೀಶ

 

ಚಿತ್ರ್