ಒಂದು ಗಝಲ್

ಒಂದು ಗಝಲ್

ಕವನ

ಮದಿರೆಯ ಜೊತೆಗೇ ನಾಟ್ಯವಾಡಲು ನನ್ನವಳಿಲ್ಲ

ಹೊತ್ತಿಲ್ಲದೇ ಬಾಗಿಲೆಳೆಯೇ ತೆಗೆಯಲು ನನ್ನವಳಿಲ್ಲ

 

ದೇಹದಲಿ ಮತ್ತೇರಿತ್ತು ಅವಳುಡುಗೆಯ ನೋಡಿ

ಕಡಲಿನ ಭಾವನೆಗಳ  ಹಂಚಿಕೊಳ್ಳಲು ನನ್ನವಳಿಲ್ಲ

 

ತುಡಿತ ಇಲ್ಲದ ಚೆಲುವಿನಲಿ ಒಲವು ಮೂಡುವುದೆ

ಅರಿವಿನ ಕಣ್ಣುಗಳ ತೆರೆದುಕೊಳ್ಳಲು ನನ್ನವಳಿಲ್ಲ 

 

ಹೊರಗಿನ ಆಕರ್ಷಣೆ ಸಹಜವಾಗಿ ಬೆಳೆಯುತ್ತದೆ

ಚಿಂತನೆಗೆ ಚಿಂತೆ ಸೇರಿದರೆ ಸಂತೈಸಲು ನನ್ನವಳಿಲ್ಲ

 

ಹೆಗಲ ಕೊಂಡಿ ಕಳಚಿ ಬಿದ್ದಿದೆ ನಡು ರಸ್ತೆಯಲಿ ಈಶಾ

ಬರಡಾದ ದೇಹದಲಿ ಪ್ರೇಮ ಚಿಗುರಲು ನನ್ನವಳಿಲ್ಲ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್