ಒಂದು ಗಝಲ್

ಒಂದು ಗಝಲ್

ಕವನ

ಹೆತ್ತವರಿಗೆ ಮಕ್ಕಳು ಹೇಗಿದ್ದರೂ ಚೆಂದ

ಹಿತ್ತಲಿನ ಮರಗಳು ಬಾಗಿದ್ದರೂ ಚೆಂದ

 

ಮುತ್ತು ಸವಿವ ಹೊತ್ತು ಬೇಡವೆನ್ನುವರೇ

ಕತ್ತದುವು ಉಳುಕಿ ಹೋಗಿದ್ದರೂ ಚೆಂದ

 

ಚಿತ್ತವನು ಕಲಕಿ ನಗುವ ಜನರೇ ಸುತ್ತಲೂ

ಭಾಗ್ಯವಂತರು ಸುಮ್ಮನೆ ಸಾಗಿದ್ದರೂ ಚೆಂದ

 

ಜೀತದ ನಡುವೆಯೇ ಬೆಳಕು ಕಾಣುವುದೇ

ಉಸಿರಿರುವ ಮಂದಿ ಸೊರಗಿದ್ದರೂ ಚೆಂದ

 

ಮತ್ಸರಿಗಳ ಎಂದಿಗೂ ದೂರವಿಡು ಈಶಾ

ಕಷ್ಟ ಅರಿತವರ ನಡೆ ಬೀಗಿದ್ದರೂ ಚೆಂದ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್