ಒಂದು ಗಝಲ್
ಕವನ
ಮಾತುಗಳು ಮುಳ್ಳಾಗದಿರಲಿ ಗೆಳತಿ
ನೀ ನನ್ನ ಒಲವಿನೊಲವಿನ ಸವಿ ಸತಿ
ತೆರೆಯ ಎಳೆದರೆ ಪ್ರೀತಿಗೆ ಬೆಲೆಯೆಲ್ಲಿದೆ
ಕೈಹಿಡಿಯದೆ ಹೋದರೆ ಸಿಗದೆ ದುರ್ಗತಿ
ಪ್ರೇಮ ಹೂವಿನ ತರಹ ಮೃದುವಾಗಿರಲಿ
ಬಿಗಿತದ ನಡುವೆಯೂ ತಪ್ಪಿಸಿ ಹೋಗುತಿ
ಸುಖವಿಲ್ಲದೆ ಹೋದರೆ ಬದುಕಲ್ಲಿ ಖುಷಿಯೇ
ಸವಿಯಿಲ್ಲದೆ ಕಾಡಿದರೆ ಬಾಳಲ್ಲಿಯೆ ಸಾಯಿತಿ
ತೂಕ ತಪ್ಪಿದ ಮಾತುಗಳು ಹಿತವಾದವೇ ಈಶಾ
ಎಲ್ಲೆಂದರಲ್ಲಿ ನಮ್ಮ ನಡುವೆ ತಲೆಯೆತ್ತಿದೆ ಜಾತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್