ಒಂದು ಗಝಲ್
ಕವನ
ಜೀವನದಲಿ ಸೋತೆ ಮನ ಮುಂದೇ ಹೋಯಿತು
ಬದುಕಿನಲಿ ಬಿದ್ದೆನು ತನುವು ಬೆಂದೇ ಹೋಯಿತು
ತಪ್ಪು ತೆಪ್ಪಗೇ ಕುಳಿತಿದೆಯಿಂದು ಹೃದಯದಾಳದಲಿ
ಒಪ್ಪವು ಸುಖವನ್ನು ಹೀಗೆಯೇ ತಂದೇ ಹೋಯಿತು
ಹಸಿರಾಗಿರುವ ಸುಂದರ ಭಾವನೆ ನಮ್ಮೊಳೆಂದಿರಲಿ
ಒಲವೆಲ್ಲವು ಭಯಗಳ ಹೊಡೆತಕೆ ಹಿಂದೇ ಹೋಯಿತು
ಅಮೃತದಲಿಂದು ವಿಷವಿದೆ ಹೇಳುವರಿಂದ ದೂರವಿರು
ಗುರಿಯಿರಲಿ ಮಹತ್ತಮ ವಿಚಾರವು ಸಂದೇ ಹೋಯಿತು
ಮಸಲತ್ತು ಮಾಡಿದರೂ ನ್ಯಾಯವು ಸಿಗಲಾರದು ಈಶಾ
ಬಾಳಲ್ಲಿ ದೃಷ್ಟಾಂತವ ಕೊಡುವರೇ ಎಂದೇ ಹೋಯಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್