ಒಂದು ಗಝಲ್
ಕವನ
ಪ್ರತಿ ಬದುಕಿನಲ್ಲಿ ಮುಂದೆ ಬಂಡಿ ಇದೆ
ಗೊತ್ತು ಗುರಿಯ ಎಡೆಯೆ ಗುಂಡಿ ಇದೆ
ಬಾಳ ಒಲುಮೆ ಸದಾ ನೋವು ನಲಿವು
ನನ್ನ ಮಾತೆ ನಡೆಯಲೆಂಬ ಚಂಡಿ ಇದೆ
ದ್ವೇಷ ಕೈಯ ಹಿಡಿಯೆ ಮಾತು ಬೇಡವೇ
ಗುಡಿಯ ಎಡ ಬಲಗಡೆಯು ಹುಂಡಿ ಇದೆ
ಜೀವ ಒಂದೆ ಸವನೆ ನರಳೆ ಮತ್ತೆ ಮರಣ
ಹೃದಯ ಬೇನೆ ಹಿಂಡೆ ನಡುವೆ ತಂಡಿ ಇದೆ
ಭಾವ ಇಲ್ಲದ ಬಾಳ ಕಲೆಗೆ ಬೆಲೆಯೆ ಈಶ
ನಮ್ಮ ನಡೆ ನುಡಿಗೆ ನನಸಿನ ಕೊಂಡಿ ಇದೆ
***
ನುಡಿ ಹಾರ
ಮನವನವ ಹಿಡಿತದೊಳು ಇಟ್ಟಿರುವನೆ ಸಂತನಯ್ಯ
ಪಾಠವನು ಬೋಧಿಪನೆ ಸಂತನಯ್ಯ
ಪ್ರತಿದಿನವು ಜನತೆಯನು ಎಚ್ಚರಿಪನೆ ಸಂತನಯ್ಯ
ತಾಯಂತೆ ಸಲಹುವನೆ --- ರಾಮ ರಾಮ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
