ಒಂದು ಗಝಲ್

ಒಂದು ಗಝಲ್

ಕವನ

ನಾನು ಏನು ಎನ್ನುವುದ ಅವನು ತಿಳಿಸಲೇ ಇಲ್ಲ

ಗೊತ್ತಿದ್ದರೂ ದ್ವೇಷವ ಎಂದಿಗೂ ಥಳಿಸಲೇ ಇಲ್ಲ

 

ಒಳ್ಳೆಯ ಚಿಂತಕ ಆದರೂ ಕಲ್ಲಿನಿಂದ ಹೊಡೆದರೇಕೆ

ವಜ್ರ ವೈಡೂರ್ಯದ ಮಾಲೆಯನ್ನು ಧರಿಸಲೇ ಇಲ್ಲ

 

ಒಲುಮೆಯ ಬಲವು ಕೆಲವೊಮ್ಮೆ ಹಳ್ಳ ಹಿಡಿಸುತ್ತದೆ

ಹುಟ್ಟು ಸಾವಿನ ನಡುವೆ ಪಾಪಗಳನು ಗುಡಿಸಲೇ ಇಲ್ಲ

 

ಪ್ರಕೃತಿ ಸಾಯಬಾರದು ಎಂದಾದರೆ ಹೋರಾಡಲೇ ಬೇಕು

ಮತಿಗಳ ಜೊತೆಗೆ ಸಾಗಬೇಕು ಎಂದರೂ ಸೇರಿಸಲೇ ಇಲ್ಲ

 

ಬೆಲೆಯ ಕಳಕೊಂಡವರ ಕೈಹಿಡಿದು ನಡೆವೆ ಏಕೋ ಈಶಾ

ಸಾಧಿಸಬೇಕೆಂದು ಹೊರಟರೂ ನೀನೆಂದೂ ಗಳಿಸಲೇ ಇಲ್ಲ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

 

ಚಿತ್ರ್