ಒಂದು ಗಝಲ್

ಒಂದು ಗಝಲ್

ಕವನ

ಪ್ರೀತಿಯ ಒಳಗಿನ ಅರ್ಥವನು ನಿನ್ನಿಂದ ಕಲಿತೆ ಸಖಿ

ಬಾಳುವ ಕಲೆಯನು ತಾಯಿಯಿಂದ ಕಲಿತೆ ಸಖಿ

 

ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು

ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಸಖಿ

 

ನಿನ್ನೆಸರಿನಿಂದ  ಪ್ರಣಯವು ಹೇಗೆ ಸಾಗಿದೆಯಿಂದು

ಸುಖದಲ್ಲಿಯ ಪಾಠವ ಜತನದಿಂದ ಕಲಿತೆ ಸಖಿ

 

ಮದಿರೆಯ ಸ್ನೇಹಾಚಾರವ ನೀ ಆರಾಧಿಸುತ ಕುಳಿತೆ

ಉದರಕೆ ಬೇಕಾದ್ದ ಸಂಬಂಧದಿಂದ ಕಲಿತೆ ಸಖಿ

 

ನಿನಿತ್ತ ಕೊಡುಗೆಗಳ ಬಳಸಿ ಸಾಗುತಿಹನಿಂದು ಈಶಾ

ಬೆಸುಗೆಯ  ಒಲವನ್ನು ಸವಿಯಿಂದ ಕಲಿತೆ ಸಖಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್