ಒಂದು ಗಝಲ್

ಒಂದು ಗಝಲ್

ಕವನ

ಶಿರವೇ ಇಲ್ಲದಿಹ ನುಡಿಗಳಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ

ಬರಹದ ಮಹತ್ವವನ್ನು ಅರಿಯದೆ ಬರಿದೆ ವಾದಗಳು ಬರುತ್ತವೆ

 

ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳುಗಳು ಗಟ್ಟಿಯಾದಿತೆ

ಕಾರಣವಿಲ್ಲದೆಯೆ ತೆಗಳುವವರ ನಡುವೆಯೇ ದ್ವೇಷಗಳು ಬರುತ್ತವೆ

 

ಮುಡಿಯೊಳಗೆ ಒಣಗಿದ ಗುಲಾಬಿಗಳು ಇರುವಂತೆ ಕವನಗಳು ಇರಬೇಕೆ

ಮಡಿಯವರ ಬಾಯಿಯೊಳಗಿನ ಚಪಲವ ಕಂಡಾಗ ರೋಷಗಳು ಬರುತ್ತವೆ

 

ಚಿಗುರೆಲೆಯಲ್ಲೂ ಹೀಗೆ ಹೊಸತನದ ಕಾವ್ಯಗಳ ಕಾಣಬಹುದು ಬರೆಯುತಿರು

ಹಗೆಯಿರುವವರ ನಡುವೆಯೇ ತುಂಬಾ ದ್ವಿಮುಖವೆನಿಪ ವೇಷಗಳು ಬರುತ್ತವೆ

 

ಉಂಡಮನೆಗೆ ದ್ರೋಹಗಳನು ಬಗೆಯುವವರಿಗೆ ಜಗದಲ್ಲಿ ಏನೆನ್ನಲಿ ಈಶಾ

ಹಾಸಿಗೆಯೊಂದು ಇದ್ದಷ್ಟಕ್ಕೇ ನಾವೆಲ್ಲರು ಕಾಲುಚಾಚದಿರೆ ದೋಷಗಳು ಬರುತ್ತವೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್