ಒಂದು ಗಝಲ್

ಒಂದು ಗಝಲ್

ಕವನ

ಹಿಯಾಳಿಸಿದವರ ನಡುವೆ ಮತ್ತೆ ನೀನು ಸೇರಬೇಡ ಹಾಳಾಗುವೆ 

ಚರಿತ್ರೆಹೀನರ ಜೊತೆಗೆ ಬೆರೆತು ಹೀಗೆಯೇ ಕೂಟಬೇಡ ಹಾಳಾಗುವೆ

 

ಪ್ರೀತಿ ಸಿಗದವರಿಂದ ದೂರವಾಗಿಯೇ ಇದ್ದರೆ ಒಳಿತಲ್ಲವೆ ನಿನಗೆ

ಪ್ರೇಮಿಗಳ ತರಹ ಮೈಮರೆಯುತ್ತಲೇ ಕಾಡಬೇಡ ಹಾಳಾಗುವೆ

 

ಸ್ವಾರ್ಥಿಗಳ ಸುಳ್ಳುಗಳೆಡೆ ನಡೆವ ನಿನಗೇನು ಕೆಲಸವೋ ನಾನರಿಯೆ 

ಉಪ್ಪರಿಗೆಯಲಿ ಕುಳಿತು ಹಾಡುವವರ ಸಂಗಬೇಡ ಹಾಳಾಗುವೆ 

 

ನನ್ನಂತರಂಗದೊಳು ನೆಲೆಸಿ ಮಾತನ್ನು ಕೇಳುತ್ತಾರೆಯೆಂದು ತಿಳಿದೆಯಾ

ಕನಸು ಮನಸ್ಸಿನಲ್ಲೂ ಹತ್ತಿರಬಾರದವರೊಡನೆ ಸಾಗಬೇಡ ಹಾಳಾಗುವೆ

 

ಮೌನದೊಳಗೆ ಸಿಗದ ಪಾಯಸದೂಟವು ಇನ್ನೆಲ್ಲಿ ಸಿಗುವುದೊ ತಿಳಿಯದಾದೆ

ಜೀವನದಲ್ಲಿ ಈಶನ ಒಲುಮೆ ಬಿಟ್ಟವರ ಸನಿಹವಂತೂ ಕೂರಬೇಡ ಹಾಳಾಗುವೆ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್