ಒಂದು ಗಝಲ್
ಕವನ
ಸಾಲದ ಶೂಲಕ್ಕೆ ಸಿಲುಕುತ್ತಲೇ ಒದ್ದಾಡದಿರು ನೀನು
ಸಾಲ ವಸೂಲಾತಿಯವರ ಜೊತೆ ಗುದ್ದಾಡದಿರು ನೀನು
ಮಲಗುವ ಚಾಪೆ ಇದ್ದಷ್ಟೇ ಕಾಲು ಚಾಚಲಿಲ್ಲ ಯಾಕೆ
ವಿಷ ಕುಡಿದು ಜೀವ ಉಳಿಸಲು ಹೊರಳಾಡದಿರು ನೀನು
ದುಡಿಮೆ ಒಳಗಿನ ಸುಖವ ಎಂದಿಗೂ ಅರಿತಿರುವಿಯೇನು
ಗಟ್ಟಿ ದೇಹವ ಪಡೆದು ಜೀವನಕ್ಕೆ ಹೋರಾಡದಿರು ನೀನು
ಅತಿಯಾದ ಆಸೆಯು ಮುಂದೆ ನರಕವಾಗುವುದು ತಿಳಿಯೋ
ಯಾವತ್ತೂ ಚಕ್ರ ಬಡ್ಡಿಯ ವ್ಯವಹಾರಕ್ಕೆ ಕುಣಿದಾಡದಿರು ನೀನು
ಸಂಸಾರದ ಒಲುಮೆಯ ಭವಿಷ್ಯಕ್ಕೆ ಮನಸಿಟ್ಟು ದುಡಿ ಈಶಾ
ಏನೋ ಮಾಡಲು ಹೋಗಿ ಸೋಲೊಳು ನಡೆದಾಡದಿರು ನೀನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
