ಒಂದು ಗಝಲ್

ಒಂದು ಗಝಲ್

ಕವನ

ಪ್ರೀತಿ ಹಚ್ಚೆಯನು ಹಚ್ಚಿಸಿಯೊಳಗೆ  ಹೋದೆಯೋ

ಮನಕೆ ಒಲವನು ತುಂಬಿಸಿಯೊಳಗೆ ಹೋದೆಯೋ

 

ಸಾಗರವೆಂಬ ಮನದ ಅಲೆಯಲ್ಲೀಗ ನಲಿಯುತ್ತಿಹೆ ಯಾಕೆ 

ಗುಡಿ ಗುಡಿಯಲ್ಲಿರುವ ಘಂಟೆಯೊಳಗೆ ಹೋದೆಯೋ

 

ಕಾಡಿನಲ್ಲಿರುವ ನಡುವಿನ ದಾರಿಯೊಳಗೆ ನಡೆದು ಹೋಗು

ಆಗಸದಲ್ಲಿಹ ಮೋಹಕ ಚಂದಿರನೊಳಗೆ ಹೋದೆಯೋ

 

ಮಳೆಹನಿಯ ನೀರಾಟದ ಆರ್ಭಟದೊಳಗೆಯೇ ಮೆಲ್ಲ ಸಾಗು

ಮರವನೇರುತ ಗೆಲ್ಲನಿಡಿದು ಕನಸಿನೊಳಗೆ  ಹೋದೆಯೋ

 

ದೀಪವಿರುವ ಕೋಣೆಯಲ್ಲಿ ಸ್ಥಳವನಿಡಿದು ಕುಳ್ಳಿರುತ ಹಾಡು

ಚಿಲಕವಿರದ ಮನೆಯ ಪಡಸಾಲೆಯೊಳಗೆ  ಹೋದೆಯೋ

 

ಸುಪ್ತವಿರುವ ಚೆಲುವಿನಲ್ಲಿಯ ಸೊಬಗಿನೊಳಗೆ ಸೇರಿ ನಲಿಯು

ಚಲಿಸದಿರುವ ರಥದಂತಿರುವ ಬದುಕಿನೊಳಗೆ ಹೋದೆಯೋ

 

ಮೌನವನ್ನು ಹೀಗೆಯೇ ಮರಿದು ಮಾತಿನಲ್ಲಿಯೇ ಬೆಳಕಾಗು ಈಶಾ

ಅನಂತ ಕನಸುಗಳ ವ್ಯರ್ಥವೆನಿಪ ನನಸಿನೊಳಗೆ ಹೋದೆಯೋ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್