ಒಂದು ಗಝಲ್
ಕವನ
ನಾವು ಬರೆದದ್ದೇ ಸಾಹಿತ್ಯ ಅಂದಿದ್ದಾರೆ ಗುರು
ಓದುಗರೆಲ್ಲರೂ ದಡ್ಡರೆಂದು ತಿಳಿದಿದ್ದಾರೆ ಗುರು
ಬರೆದುದಲ್ಲಿ ಒಂದು ನೀತಿಯೂ ಇಲ್ಲವು, ಯಾಕೆ ?
ಒಂದೇ ಸಮಾಜದಲ್ಲಿ ಎಲ್ಲರೂ ಬೆರೆತಿದ್ದಾರೆ ಗುರು
ಸಾಹಿತ್ಯದ ಪೂರ್ಣ ನಿಯಮವನ್ನು ಕಲಿತಿಲ್ಲವೇ ?
ಕವಿಗಳು ಕಾವ್ಯದಾ ಕಲೆಯ ಮರೆತಿದ್ದಾರೆ ಗುರು
ಈಗ ಕ್ಷುಲ್ಲಕ ಕಾರಣಗಳಿಗೆ ನಾವೇ ದೂರುದಾರರು
ಇತಿಹಾಸವನ್ನೇ ಬದಲಿಸಲಿಂದು ಕಾದಿದ್ದಾರೆ ಗುರು
ಬರವಣಿಗೆ ತಿಳಿಯದವರ ಕೈಯಲ್ಲಿಯೇ ಬರಹ ಈಶ
ಹೀಗಿರುವವರ ಬರಹಕ್ಕೆ ಓದುಗರು ಬೆಂದಿದ್ದಾರೆ ಗುರು
-ಹಾ .ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
