ಒಂದು ಗಝಲ್

ಒಂದು ಗಝಲ್

ಕವನ

ಬರಹಗಾರರಲ್ಲೂ ಜಾತಿಯ ಲೆಕ್ಕಾಚಾರ ಬಂದಿದೆ ಕವಿಯೆ

ಯಾರೇನೆ ಬರೆದರಿಂದೂ ಹೊಗಳುವುದು ಸಂದಿದೆ ಕವಿಯೆ

 

ಇವ ನಮ್ಮವನು ಎನ್ನುತ್ತಲೆ ಸಾಹಿತ್ಯದ ಕೊಲೆಯೇಕೊ

ನಿರ್ಜೀವ ಬರಹಗಳಲ್ಲೂ ಸ್ವಂತಿಕೆ ಹೋಗಿದೆ ಕವಿಯೆ

 

ಒಳ್ಳೆಯ ಕವಿತ್ವಗಳ ತೆಗಳುವ ದಂಡೇ ನಾಡಿನಲ್ಲೇಕೊ

ಉತ್ತಮ ವಿಮರ್ಶಕರು ನಾಡೊಳು ಬೇಕಿದೆ ಕವಿಯೆ

 

ಸ್ವರಜ್ಞಾನ ಇಲ್ಲದವರ ಸಾಹಿತ್ಯಕ್ಕೆ ಪ್ರಶಸ್ತಿಗಳ ಸುರಿಮಳೆ

ಕುರುಡೆನ್ನುವ ಕಾಂಚಾಣದ ರಶ್ಮಿಯದು ತಾಗಿದೆ ಕವಿಯೆ

 

ರಾಶಿರಾಶಿ ಪುಸ್ತಕಗಳ ಬರೆದರೆ ಸಾಹಿತಿಯಾಗಲಾರ ಈಶಾ

ವಿಷಯವಿಲ್ಲದೆ ಲೇಖನದಲ್ಲಿಯ ಸತ್ವವು ಬಾಡಿದೆ ಕವಿಯೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್