ಒಂದು ಗಝಲ್
ಕವನ
ನಿನ್ನ ಪಿಸುಮಾತದು ಎನ್ನ ಕಾಡುತಿರಲಿ ಗೆಳತಿ
ನನ್ನ ಮೌನವದುವು ನಿನ್ನ ಕೆಣಕುತಿರಲಿ ಗೆಳತಿ
ಸಂಬಂಧವು ಮಧುರಹಿತವಾದರೆ ಸಂಸಾರ ಜೀವನವು ಬೇಕೆ
ಮತ್ತಿರುವಾಗಲೇ ಮುತ್ತಿನ ಮಳೆಯು ಸುರಿಯುತಿರಲಿ ಗೆಳತಿ
ಉಪವಾಸದ ನಡುವೆಯೂ ಮೃಷ್ಟಾನ್ನದ ಚಿಂತೆಯೇಕೆ ನಿನಗೆ
ಕನಸಿರುವಾಗಲೇ ನನಸಿನತ್ತ ಮನವಿಂದು ಸಾಗುತಿರಲಿ ಗೆಳತಿ
ಲಾವಣ್ಯದ ಬದುಕಿನೊಳು ಸೌಂದರ್ಯ ಅರಳಲಿ ಬಿಡು
ಶಾಂತ ಸಾಗರದಂತಿರುವ ತನುವು ಕೆಂಪಾಗುತಿರಲಿ ಗೆಳತಿ
ಕೃಪೆಯೆಂಬ ಸಮುದ್ರದ ಆಳದಲ್ಲಿ ಈಜಾಡುತ್ತಿರುವೆಯಾ ಈಶಾ
ಚಂದ್ರಮನ ಬೆಳದಿಂಗಳು ಮೋಹವನು ಬೆಸೆಯುತಿರಲಿ ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ್