ಒಂದು ಗಝಲ್

ಒಂದು ಗಝಲ್

ಕವನ

ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ತಿಳಿ

ಬಾಯಿ ಬಡುಕರನ್ನೆಲ್ಲ ಒಂದು ಕಡೆಯಲ್ಲಿ ಕೂಡಿಹಾಕಿ ಪೇಟತೊಡಿಸಿ ಹರಸುತ್ತಾರೆ ತಿಳಿ

 

ಕಾಗೆಗಳು ತನ್ನಯ ಬಳಗವನ್ನು ಕರೆಯುವಂತೆ ಇಲ್ಲಿಯೂ ಕರೆಯುತ್ತಾರೋ ಯಾಕೆ 

ಸದ್ದಿಲ್ಲದೆ ಮನೆಯಲ್ಲಿರುವ ಯಾರಿಗೂ ತಿಳಿಯದಂತೆ ಹೊಸದಾದ ಬಟ್ಟೆ ಧರಿಸುತ್ತಾರೆ ತಿಳಿ

 

ಹೊಗಳುವವರ ನಡುವೆ ಬರಹದಲ್ಲಿ ಜೀವವಿಲ್ಲದಿದ್ದರೂ ಕವಿ ಅನಿಸಿಕೊಳ್ಳುತ್ತಾರೆ ಇಲ್ಲಿ

ಹಳೆಯದಾದ ಹಾಳೆಯ ಹೊಸತಾಗಿಸಿ ಓದುಗರು ಬೇಡವೆಂದರೂ ಮತ್ತೆ  ಉಣಿಸುತ್ತಾರೆ ತಿಳಿ

 

ಉಡದ ಹಿಡಿತದೊಳಿರುವಂತೆ ಸಾಹಿತ್ಯವು ಇಂತವರ ಕೈಯೊಳಗೆ ಬಸವಳಿದು ಕುಳಿತಿದೆ

ಜ್ಞಾನ  ಒಂದಿದ್ದರೆ ಸಾಧಿಸುವೆನೆಂದೋ ಉಳಿದವರ ವಿಚಾರಗಳಿಗೆ ಹೊಲಸ ಸೇರಿಸುತ್ತಾರೆ  ತಿಳಿ

 

ಹೊತ್ತಿರುವ ಹೃದಯದೊಳು ಸ್ವಂತಿಕೆಯಿರುವವರು ನಿಜ ಬರಹದೊಳು ಇಹರು ಈಶಾ

ಕನ್ನಡದ ಪದಗಳೆಂದೂ ನಿಂತಿರುವ ನೀರಲ್ಲವು ಹೊಸತನವ ಎಲ್ಲರೂ ಬಯಸುತ್ತಾರೆ ತಿಳಿ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್