ಒಂದು ಗಝಲ್

ಒಂದು ಗಝಲ್

ಕವನ

ತಾಜ್ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಒಡೆಯ

ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಒಡೆಯ 

 

ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ

ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಒಡೆಯ 

 

ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು ಹೆಣಗಳೊ

ಹರಳಾಗಿಹ ಪಾಚಿಗಳ ಲೆಕ್ಕವನ್ನು ಇರಿಸು ಒಡೆಯ 

 

ಪರಿಮಳವೇ ಇಲ್ಲದ ಮೈಯಲ್ಲಿ ಇರುವುದೆ ಸುಗಂಧ

ರಶ್ಮಿಕಳಚಿದ ಕಣ್ಣುಗುಡ್ಡೆಗಳ ಮೆಲ್ಲನೆ ಸರಿಸು ಒಡೆಯ 

 

ಮೋಹತುಂಬಿದ ಮಹಾರಾಜನಿಗೆ ಏನು ಸಿಕ್ಕಿತೋ ಈಶಾ

ನೋವೇತುಂಬಿದ ರಾಣಿಯೆಡೆಗೆ ದೃಷ್ಟಿಯನು ಹರಿಸು ಒಡೆಯ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್