ಒಂದು ಗಝಲ್
ಕವನ
ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೆ ಗೆಳತಿ
ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೆ ಗೆಳತಿ
ಸಂತಸದ ಚೆಲುವಿನಲಿ ರೂಪ ಯೌವನ ಏರುತ ಸಾಗುವುದೆ ಹೇಳು
ಸೌಂದರ್ಯ ನವ ಯುಗದ ಮೋಹದಲಿ ಒಲವು ಕಾಣುವುದೆ ಗೆಳತಿ
ಹೃದಯ ಸವಿಯುತ ಸಂತಸ ಪಡುತಿರೆ ಹೊರಟು ಬಂದಿರುವೆ ನಾನು
ಬೆತ್ತಲ ಮನಸ್ಥಿತಿಯ ತನುವಿನಾ ರೂಪದಲಿ ತಿನಿಸ ತಿನ್ನುವುದೆ ಗೆಳತಿ
ಕಣ್ಣಿನ ಹನಿಯು ಜಾರುತಿರೆ ಸುತ್ತ ತಡೆಯುವರು ಯಾರಿಹರು ಇಂದು
ಪ್ರೀತಿಗೆ ನಿತ್ಯವೂ ಗುಲಾಬಿಯ ಮುಳ್ಳದು ಚುಚ್ಚದೆ ಇರುವುದೆ ಗೆಳತಿ
ಸಂಸಾರದ ಸಂತೆಯು ನಿದಿರಾ ದೇವಿಯ ಮಡಿಲ ಅಪ್ಪುಗೆಯೆ ಈಶಾ
ಪ್ರೇಮ ಅಮಲಿನ ಸಂಕೇತದ ಧ್ವನಿಗಿಂದು ಧನಸ್ಸ ಎತ್ತುವುದೆ ಗೆಳತಿ
-ಹಾ ಮ ಸತೀಶ ಬೆಂಗಳೂರು*
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
