ಒಂದು ಗಝಲ್
ಕವನ
ಇನ್ನೊಬ್ಬರ ಮನವನೆಂದೂ ಕೆಣಕದಿರು ನೀನು
ಪ್ರತಿಯೊಬ್ಬರ ಜೀವನದಲ್ಲೂ ಬಾಗದಿರು ನೀನು
ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು
ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು
ನಡೆವ ದಾರಿಯನು ಗಮನಿಸದೆ ಹೋಗುವರೆ
ಕಲ್ಲುಮುಳ್ಳುಗಳ ನಡುವಲ್ಲಿ ನಿಲ್ಲದಿರು ನೀನು
ಸೌಂದರ್ಯ ಇದೆಯೆಂದು ಬಂದಂತೆ ತಿರುಗುವುದೆ
ಉತ್ಸವದ ಮೂರ್ತಿಯಂತೆ ಬದುಕದಿರು ನೀನು
ಪ್ರತಿಯೊಬ್ಬರನು ಗೌರವಿಸು ಬರುವನು ಈಶಾ
ಪಂಡಿತನು ನಾನೆಂದು ಬೀಗದಿರು ನೀನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
