ಒಂದು ಗಝಲ್
ಕವನ
ಯುದ್ಧದ ಸಡಗರ,ಜಗವಿಂದು ಬೆಳಗಿರಲು ಬೇಕೆ
ಪ್ರಕೃತಿ ನಾಶವಾಗುತ್ತಿದೆ, ಜನತೆ ಮುಳುಗಿರಲು ಬೇಕೆ
ಪ್ರತಿಷ್ಠೆ ಹೂಂಕಾರ,ಭಯದ ಮಂದಿಗೆ ಕೇಳಿಸುವುದೇ
ವಿಷ ದ್ವೇಷವ ಮರೆತು, ಸ್ನೇಹದ ಕೈ ಚಾಚಿರಲು ಬೇಕೆ
ಮುಂದಿನ ಪೀಳಿಗೆಯ ಬಗ್ಗೆ ,ನಾಯಕರ ನಿಲುವೇನು
ಅನ್ನ ತಿನ್ನದೇ ಇರುವ ದೇಹಕ್ಕಿಂದು ಹಸಿವಿರಲು ಬೇಕೆ
ಕೈಹಿಡಿಯುವ ಕೈಯಲ್ಲಿ, ಇಂದು ಬಂದೂಕು ಬೇಕೇನು
ದೊಡ್ಡವರ ಅಹಂಗಳಿಗೆ ,ಬೆಚ್ಚಿದ್ದ ಜನ ಓಡಿರಲು ಬೇಕೆ
ನಿಸ್ತೇಜವಾದ ಜನರ ಕಣ್ಣುಗಳನ್ನು,ನೋಡಿಂದು ಈಶ
ಕೊಡೆ ಬಿಡೆನು ನಡುವೆ ,ಜನ ಉಸಿರು ಚೆಲ್ಲಿರಲು ಬೇಕೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
