ಒಂದು ಗಝಲ್
ಕವನ
ಬಂದಿದ್ದನ್ನು ಬಂದ ಹಾಗೆ ಅಪ್ಪಿ ಬಿಡು
ಇದ್ದದ್ದನ್ನು ಇದ್ದ ಹಾಗೆ ಮುಕ್ಕಿ ಬಿಡು
ಕಾರಣ ಇಲ್ಲದೆ ಯಾರೂ ಬೈಯರೇ
ದ್ವೇಷ ಅಸೂಯೆಯನು ಮೆಟ್ಟಿ ಬಿಡು
ರೋಗಗ್ರಸ್ಥ ಮನಕಿಂದು ಏನೆನ್ನಲಿ
ಗಾಯಕ್ಕೆ ಮುಲಾಮು ಹಚ್ಚಿ ಬಿಡು
ಜೊತೆ ಆದವ ಕೊಲೆಗಾರ ಹೇಗಾದ
ವೇದನೆಯೊಳು ಅವನ ಸುದ್ದಿ ಬಿಡು
ಬಚ್ಚಿಟ್ಟ ನೋವ ಮರೆಯಲೇ ಈಶ
ಅಸಲ ಕೊಡುವೆನು ನಾ ಬಡ್ಡಿ ಬಿಡು
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
