ಒಂದು ಗಝಲ್

ಒಂದು ಗಝಲ್

ಕವನ

ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು

ಬುವಿಯಲಿ ಬೆಳಕಿತ್ತು, ಎಂದೂ ನೋಡದೆ ಇಹರು

 

ಶಿಖರದಲಿ ಹಿಂದೆ ಮರಗಳಿದ್ದವೋ, ಇಂದಿಲ್ಲ ಏಕೆ

ಒಡಲಿನಲಿ ತುಂಬಿದ್ದ ಪ್ರಾಣವನು, ಕಾಣದೆ ಇಹರು

 

ಮನದಲಿ ಮಲಗಿರುವ ಹೆಣ್ಣಿನಲಿ, ಕನಸದು ಇದೆಯೆ

ಜೀವನ ದೋಣಿ ಮುಳುಗುತ, ಜನರು ಹಾರದೆ ಇಹರು

 

ಭವದಲಿ ಮೂಡಿರುವ ಬಯಕೆಗಳಿಗೆ, ಕೊನೆ ಇಲ್ಲವೆ

ತಳದಲಿ ಕಂಡಿರುವಂತ ನೋವನು, ಹೇಳದೆ ಇಹರು

 

ಕತ್ತಲಲಿ ಬೆಳಕ ಹೇಗೆ ಹುಡಕಿದರೂ, ಸಿಗಲಿಲ್ಲ ಈಶಾ

ಮರದಲಿ ಕುಳಿತವರ ನೋಡಿದರೂ, ಚೀರದೆ ಇಹರು

 

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್