ಒಂದು ಗಝಲ್

ಒಂದು ಗಝಲ್

ಕವನ

ನಾಡು ಬೆಳಗಿತು,ಬಾನು ಮಳೆಯ ಹೆರಬೇಡವೆ ಸಖಿ

ಕಾಡು ಉಳಿದರೆ ಸಾಕೇ ಹಸಿರನು ಹೊರಬೇಡವೆ ಸಖಿ

 

ಕೇಡು ಮಾಡಿರುವ ಹಣತೆಗೆ,ಬೆಳಕ ಹಚ್ಚುವರು ಯಾಕೆ

ಹಾಡು ಹೇಳಿದರೆ ಸಾಕೇನು,ಲಯವು ಬರಬೇಡವೆ ಸಖಿ

 

ಜಾಡು ಹಿಡಿದು ಹೊರಟ ಇರುವೆಗಳ,ನೀನು ಕಂಡೆಯಾ

ಪಾಡು ಮುಂದಿನ ದಿನಕ್ಕೇ, ಆಹಾರ ತರಬೇಡವೆ ಸಖಿ

 

ಬೇಡು ಒಳ್ಳೆಯದ ಜೀವನ ಬೆಳಗಲು, ಬೇಡ ಆತುರವು

ನೋಡು ಈಗ ಅವಸರದ ಪ್ರೀತಿಯ ಹೇರಬೇಡವೆ ಸಖಿ

 

ಸೇಡು ಇರದೆಲೆ,ಬದುಕ ರೀತಿಯನು ಅರಿತುಕೋ ಈಶಾ

ಆಡು ಮುಟ್ಟದ ಸೊಪ್ಪಿಲ್ಲ,ಎನ್ನುತ್ತಾ ದೂರಬೇಡವೆ ಸಖಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್