ಒಂದು ಗಝಲ್
ಕವನ
ಬಾನ ಸುಂದರ ಚಿತ್ರ ಲೋಕವು ನೀನು ಕೊಡುವ ಮುತ್ತು
ಜೀವ ಪಾಠವ ನೀಡಿ ಸಾಗಿದೆ ನಾನೆ ನೀಡುವ ಮುತ್ತು
ಹುಟ್ಟು ಚೆಲುವೊಳು ಪಾತ್ರ ಸೋರಿತೆ ಮತ್ತು ಕರಗಿತು ಏತಕೆ
ಗಟ್ಟಿ ಕುಳವು ಸೋತು ಹೋಗಲು ಮತ್ತೆ ಕಾಡುವ ಮುತ್ತು
ಹಟ್ಟಿ ಕರುವದು ತಾಯ ಬಳಿಗದು ಹೇಗೆ ಓಡಿತು ನೋಡೆಯ
ತಟ್ಟಿ ಮೇಲಣ ಹನಿಯ ಶಬ್ದಕೆ ಕುಣಿದು ಹಾಡುವ ಮುತ್ತು
ಗಾನ ಸುಂದರ ಒಲಿದ ರಾಗವು ಇಂದು ಎಲ್ಲಿಗೆ ಹೋಯಿತೊ
ದಾನ ಮಾಡುವ ಕೈಯು ಎಲ್ಲಿದೆ ಕರೆದು ಬೇಡುವ ಮುತ್ತು
ಸೋತು ಸುಮ್ಮನೆ ಕುಳಿತೆಯಲ್ಲೊ ನನ್ನ ಒಲವಿನ ಈಶ
ಘಾತ ಜೀವನ ಬೇಡವಾಗಿದೆ ಸೋತು ಓಡುವ ಮುತ್ತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
