ಒಂದು ಗಝಲ್
ಕವನ
ವಿನಾಕಾರಣ ಶಬ್ದವು ಮಾತ ಆಡದು ತಿಳಿ
ಭಾಷೆ ಅರಿಯದೇ ಅಕ್ಷರವು ಮೂಡದು ತಿಳಿ
ತನಗೆ ತಿಳಿದಿದೆ ಅನ್ನುವುದೇ ಅಹಂ ಅಲ್ಲವೆ
ತಿಳಿದವರ ಮನವು ನಿನ್ನನು ನೋಡದು ತಿಳಿ
ಗೊತ್ತಿರದ ವಿಚಾರವು ಗೊತ್ತಿದೆ ಎನ್ನುವುದ್ಯಾಕೆ
ಕಪಟಿಗೆ ಹೀಗೆ ಗೆಳೆತನವೆಂದೂ ಕೂಡದು ತಿಳಿ
ಗೊತ್ತಿರುವ ಮಂದಿ ಮಾತಲಿ ನಯವಿಲ್ಲವೇಕೆ
ಹೊತ್ತು ಕಳೆದಂತೆಲ್ಲಾ ಮತ್ಸರದ ಗೂಡದು ತಿಳಿ
ತನ್ನ ಮೂಗಿನ ನೇರಕ್ಕೆ ಏನೂ ನಡೆಯದು ಈಶಾ
ಮೋಸದ ಬರೆಹ ಕಾಣದ ಕೈಯ ಬೀಡದು ತಿಳಿ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
