ಒಂದು ಗಝಲ್

ಒಂದು ಗಝಲ್

ಕವನ

ಅಮ್ಮನೆಂದರೆ ಹೀಗೆಯೆ ಪ್ರೀತಿಯ ವಾಣಿ ಅವಳು

ಪ್ರೇಮದೊಳಗಿನ ಸುಂದರ ಸಿಂಚನದ ಮಣಿ ಅವಳು

 

ಮಡಿಲಲ್ಲಿ ತಲೆಯಿಟ್ಟು ಮುದದಿಂದ ಮಲಗಿ ನಿದ್ರಿಸಿದೆ

ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅವಳು

 

ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು

ಆರೈಕೆಯ ಮಾಡಿ ವಿದ್ಯೆಯನು ಕೊಟ್ಟ ಕಣಿ ಅವಳು

 

ಜೀವನಕ್ಕೆ ಪಾಠವ ಹೇಳುತ ಸರಿದಾರಿಗೆ ತಂದವಳಲ್ಲವೆ

ನಮಗೆ ಬಾಯಾರಿದಾಗ ನೀರನು ಉಣಿಸಿದ ಪಾಣಿ ಅವಳು

 

ಈಶನ ಮಾತನ್ನು ಮುರಿಯದೆ ಮುಂದಕೆ ಸಾಗಿದವಳು

ನನ್ನೊಲುಮೆಯ ಮಹಾತಾಯಿ ಜನ್ಮದಾತೆ ಗಣಿ ಅವಳು

 

ಕಣಿ = ಭವಿಷ್ಯ

ಪಾಣಿ =  ಕೈ

ಮಣಿ = ರತ್ನ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್