ಒಂದು ಗಝಲ್

ಒಂದು ಗಝಲ್

ಕವನ

ಕನಸು ಮೂಡಿ ನನಸು ಚಿಗುರೆ ಎಲ್ಲಿ ಇರುವೆ ಶ್ಯಾಮಲೆ

ಮನದ ಸುತ್ತ ನೀನೆ ಸೇರೆ ಮೆಲ್ಲ ಬರುವೆ ಶ್ಯಾಮಲೆ

 

ನಿತ್ಯ ನೇಮ ನಡತೆಯಿರಲು ಮಿಥ್ಯ ಪದವಿ ಏತಕೆ

ಒಲುಮೆ ಸುರಿಯೆ ತನುವು ಅರಳೆ ಮಾತೆ ಗುರುವೆ ಶ್ಯಾಮಲೆ

 

ಭಾವ ಬಿಂದು ಒಂದು ಆಗೆ ಕಷ್ಟವೇಕೆ ಎಂದಿಗು

ಚೆಂದದಿಂದ ಪ್ರೀತಿ ಹೊಮ್ಮೆ ಪ್ರೇಮ ಸುರುವೆ ಶ್ಯಾಮಲೆ

 

ಬಾನ ಬಯಲ ತಾರೆ ಚೆಂದ ಚಂದ್ರನೊಲುಮೆ ಬಾಗಿದೆ

ಹಸಿರು ಕಂಡ ನೆಲದ ಸವಿಗೆ ಚಿಲುಮೆ ಹೊರುವೆ ಶ್ಯಾಮಲೆ

 

ಚಿಂತೆಯಿರದ ಹೃದಯದೊಳಗೆ ಕಾಂತಿ ತುಂಬೊ ಈಶಾ

ಕುಸುಮದೊಳಗೆ ಮೋಹ ಕಂಡೆ ತನುವ ತರುವೆ ಶ್ಯಾಮಲೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್