ಒಂದು ಗಝಲ್

ಒಂದು ಗಝಲ್

ಕವನ

ಮನವು ಇರುವಿಕೆಯ ನಡುವೆ ಸಾಗಲಿ ಹೀಗೆ

ಧ್ಯಾನಗಳ ಎಡೆಯಲ್ಲಿ ತನುವು ಮಾಗಲಿ ಹೀಗೆ

 

ಕ್ಷಣಗಳ ಜೊತೆಯಲ್ಲೇ ಬಾಳಬೇಕು ನಾವಲ್ಲವೆ

ಯೋಗದ  ಮಿಂಚಿಗೆ ಮೈಯು ಬಾಗಲಿ ಹೀಗೆ

 

ಆತ್ಮದುಸಿರ ವಿದ್ಯುತ್ ನಾಡಿಯಲ್ಲಿ ಹೊಮ್ಮಲಿ

ಚೈತನ್ಯ ಚಿಂತನೆ ಹೃದಯದಲಿ ಮೊಳಗಲಿ ಹೀಗೆ

 

ಸಂತೋಷ ಬದುಕಿನ ಉಸಿರಲ್ಲಿ ಚೇತನ ಹರಡಲಿ

ಸವಿಸ್ತಾರದ ನಡೆಯಲಿ ಸವಿನುಡಿ ಬೀಗಲಿ ಹೀಗೆ

 

ಆರೋಗ್ಯ ಸಂಸ್ಕೃತಿ ಸಾಮರಸ್ಯವ ಚಿಮ್ಮಲಿ ಈಶಾ

ಸದಾಶಯ ಸಕಾರಣದ ಸಂಯೋಗ ಬೆಳಗಲಿ ಹೀಗೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್