ಒಂದು ಗಝಲ್
ಕವನ
ಕೊಟ್ಟು ತೆಗೆದುಕೊಳ್ಳುವನ ನಡುವೆಯೇ ಇರುವೆನು ನಾನಿಂದು
ಬಿಟ್ಟು ಬಿಡದೇ ಕಾಡಿಸುವವನ ಬಗ್ಗೆಯೇ ಅರಿವೆನು ನಾನಿಂದು
ಹೊಸತನದ ಕಡೆಗಿಂದು ವಾಲುವುದು ತಪ್ಪಾಗುವುದೆ ಹೇಳಯ್ಯ
ಅನ್ನೋನ್ಯ ಇರುವ ವ್ಯಕ್ತಿಯಿಂದ ಹೀಗೇ ಕಲಿವೆನು ನಾನಿಂದು
ಹಳತನ್ನೇ ಎಂದೂ ಹೊಸತೆಂದು ಹೇಳುವುದು ಸಂಸ್ಕೃತಿಯೇನು
ನಿಶ್ಚಯವಾದ ವಿವೇಕ ಇರುವಲ್ಲಿ ಎಂದಿಗೂ ನಲಿವೆನು ನಾನಿಂದು
ಪ್ರತಿ ನಡೆಗೂ ಸೌಜನ್ಯದ ಯಶಸ್ವಿದೆ ಎಂಬುದ ಅರಿತಿರುವನೇನು
ವಾರ್ಧಕ್ಯಕ್ಕೆ ಆರೋಗ್ಯದ ಸೊಬಗಿರಲು ಬರುವೆನು ನಾನಿಂದು
ಜೀವಿತದ ಅವಧಿಯು ಯಾವತ್ತಿಗೂ ನನಗೆ ಪುನರ್ನವ ಈಶಾ
ತಾರತಮ್ಯ ಅನುಭವಿಸುತ್ತಾ ನೊಂದರೂ ಮೆರೆವೆನು ನಾನಿಂದು
(ಪುನರ್ನವ -- ಮತ್ತೆ ಹೊಸತು
ವಾರ್ಧಕ್ಯ -- ಮುದಿತನ)
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
