ಒಂದು ಗಝಲ್
ಕವನ
ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ
ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಕನಸುಗಳೇ ಬಾಳಿನಲಿ ಬೀಳದೆ ಸವಿಯನ್ನು ಉಣ್ಣುವುದೆ ಬೇಡವೆ ಹೇಳಿಂದು
ಭಯದೊಳಗಿನ ಶೀತಲ ಗೋರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಅಸತ್ಯಗಳ ನಡುವೆಯೇ ಸತ್ಯಗಳು ಮರಣ ಹೊಂದಿವೆಯೋ ನೋಡು ಬಾರೆ
ದಾರಿಯೊಳಗಿನ ನಿರ್ಮಲ ಕೇರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಅಗೋಚರಗಳ ನಡುವೆಯೆ ಹೊರಟಿರುವನು ನಗುವೇ ಇಲ್ಲದ ಸರದಾರ ಈಶಾ
ಗೋಚರದೊಳಗಿನ ಅಮಲಿನ ಭಾವನೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
