ಒಂದು ಗಝಲ್

ಒಂದು ಗಝಲ್

ಕವನ

ಪ್ರೀತಿಯಿರದ ಬಾಳಿನಲ್ಲಿ, ಸವಿಯಿರುವುದೇ ಹೇಳೆ

ಪ್ರೇಮವಿರದ ಬದುಕಿನಲ್ಲಿ, ಸ್ನೇಹವಿರುವುದೇ ಹೇಳೆ 

 

ಒಂಟಿತನದಿ ಸಿಡುಕಿದ್ದರಿಂದು, ಮೈಮನಗಳು ಬೇಕೆ 

ತನುವೊಳಗಿನ  ಕನಸಿನಲ್ಲಿ ಮನವಿರುವುದೇ ಹೇಳೆ 

 

ಒಲವಿನಾಳ ಒಡಲಿನೊಳಗೆ , ಸಿಲುಕದಂತೆಯೇ ಸಾಗಿದೆ

ಚತುರೆಯಾಳ ಚೆಲುವಿನಲ್ಲಿ, ಮೋಹವಿರುವುದೇ ಹೇಳೆ 

 

ಮಾತಿನಾಳದೊಳಗೆ ಮೌನ , ಚಿತ್ತವಿಂದು ಸೊರಗಿದೆ 

ಮೌನವಿರುವ ತಿರುವಿನಲ್ಲಿ, ನನಸಿರುವುದೇ ಹೇಳೆ 

 

ಈಶನೊಡಲ ಕಡಲಿನಲ್ಲಿ, ಹುಟ್ಟ- ದೋಣಿ ಮರೆತಿದೆ 

ಚಿಂತೆಯಿದ್ದ ನೋವಿನಲ್ಲಿ, ಖುಷಿಯಿರುವುದೇ ಹೇಳೆ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್