ಒಂದು ಗಝಲ್

ಒಂದು ಗಝಲ್

ಕವನ

ತುರುಬ ತುಂಬ ಹೂವ ಮಡುಗಿ ಎತ್ತ ಸರಿದೆ ನಲ್ಲೆ

ನಾಟ್ಯದಂತೆ ನಡೆಯೆ ನೀನು ಗಮನ ಸೆಳೆದೆ ನಲ್ಲೆ

 

ಕಿರಣಕರಳಿ ನಿಂತ ನಿನಗೆ ಮೋಹದೊಳಗೆ ಸೊಕ್ಕೆ

ಮಧುವನೆಲ್ಲ ಮನಸಿನಲ್ಲೆ ಪೂರ ಹೀರಿ ನಲಿದೆ ನಲ್ಲೆ

 

ಎಲ್ಲೊ ಕೂತು ನನ್ನ ನೋಡಿ ಮನದಿ ನಕ್ಕಯೇ ಬಾಗಿ

ಕದ್ದು ಮುಚ್ಚಿ ಬಂದ ಗಳಿಗೆ ತಬ್ಬಿ ಕಟಿಯ ಹಿಡಿದೆ ನಲ್ಲೆ

 

ಚಿತ್ರ ಸೊಬಗು ಸುತ್ತ ಮುತ್ತ ಸವಿಯ‌ ಹರಡೆ ನಲಿವು

ಕಳ್ಳ ಬೆಕ್ಕಿನಂತೆ ಇಂದು ಸೆರಗ ಹಿಡಿದು ಎಳೆದೆ ನಲ್ಲೆ

 

ಇರುಳು ಕಳೆಯೆ ಹೊತ್ತು ಮೂಡೆ ಎಲ್ಲಿ ಇಹನು ಈಶಾ

ಬಾನ ಕಿರಣ ಚೆಲ್ಲೆ ಬುವಿಗೆ ಹೀಗೆ ಬಾಡಿ ಹೋದೆ ನಲ್ಲೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ್