ಒಂದು ಗಝಲ್
ಕವನ
ಹೀಗೆಯೇ ಬಂದು ಸಿಡಿದೊಡೆ ನೀನು ನನ್ನವನೇ ಗೆಳೆಯಾ
ಹಾಗೆಯೇ ಕೂಡಿ ಬಡಿದೊಡೆ ನೀನು ನನ್ನವನೇ ಗೆಳೆಯಾ
ಯಾರೂ ಇಲ್ಲದ ವೇಳೆಯಲ್ಲೇ ಅಮಲು ಏರಿತೇ ಹೇಳು
ಹುಳಿ ಹೆಂಡ ಹೀರಿ ಕುಡಿದೊಡೆ ನೀನು ನನ್ನವನೇ ಗೆಳೆಯಾ
ಎಲ್ಲೋ ವಾಸನೆಯು ಬೀಸಿದರೆ ಅವನು ನೀನೇಯೇನು
ಬರಿದಾದ ಕನಸ ಮುಡಿದೊಡೆ ನೀನು ನನ್ನವನೇ ಗೆಳೆಯಾ
ಯೋಚನೆಯ ಲಹರಿಗಳು ಯಾವತ್ತೂ ಒಂದೇ ಇರುವವೇ
ದ್ವೇಷದಿಂದ ಕುಟುಕಿ ಕಡಿದೊಡೆ ನೀನು ನನ್ನವನೇ ಗೆಳೆಯಾ
ಜಗತ್ತಲ್ಲಿ ಬೆತ್ತಲಾದವರು ಎಂದಿಗೂ ಉಳಿದಿರುವರೇ ಈಶಾ
ದಿನವಿಡಿ ಶಿಸ್ತೇರದೇ ದುಡಿದೊಡೆ ನೀನು ನನ್ನವನೇ ಗೆಳೆಯಾ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
