ಒಂದು ಗಝಲ್

ಒಂದು ಗಝಲ್

ಕವನ

ಬರವಣಿಗೆಯು ಕನ್ನಡದಲ್ಲಿರಲಿ ವಿಕೃತಿಯೇಕೆ

ಮಾತುಗಳೆಲ್ಲ ಸ್ಪಷ್ಟವಾಗಿರಲಿ ವಿಕೃತಿಯೇಕೆ

 

ಕತ್ತೆಗಳೂ ಒದೆಯುತ್ತವೆ ಹಿಂಗಾಲಿನಿಂದೇಕೆ

ವ್ಯವಹಾರಗಳು ಹಿಡಿತದಲ್ಲಿರಲಿ ವಿಕೃತಿಯೇಕೆ

 

ಜೀವನದಲ್ಲಿ ಮುಗಿಯದ ಪಯಣದ ದಾರಿಯಿದೆ

ಬದಲಾವಣೆಗಳು ಬದುಕಿನಲ್ಲಿರಲಿ ವಿಕೃತಿಯೇಕೆ

 

ಒಳಗಿನ ಒಪ್ಪಂದಗಳು ಸುಖದಲಿ ಅಂತ್ಯ ಕಾಣಲಿ

ಬೋಧನೆಯಲ್ಲಿಯೇ ಸತ್ಯತೆಯಿರಲಿ ವಿಕೃತಿಯೇಕೆ

 

ಜಾತಿ ವಿಜಾತಿಗಳ ವಿಂಗಡನೆಗಳು ಬೇಕೇನು ಈಶಾ

ಪರಭಾಷೆಗಳು ಹತ್ತಿರ ಸುಳಿಯದಿರಲಿ ವಿಕೃತಿಯೇಕೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್